ನಿರೂಪ್ ಭಂಡಾರಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟ. ಅವರು ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನದ 2015 ರ ಚಲನಚಿತ್ರ ರಂಗಿತರಂಗ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. == ಆರಂಭಿಕ ಜೀವನ == ನಿರೂಪ್ ಭಂಡಾರಿ ಅವರು ಆಗಸ್ಟ್ 13 ರಂದು ಕರ್ನಾಟಕದ ಪುತ್ತೂರಿನಲ್ಲಿ ಸುಧಾಕರ ಭಂಡಾರಿ ಮತ್ತು ರತ್ನ ಭಂಡಾರಿ ದಂಪತಿಗಳಿಗೆ ಜನಿಸಿದರು. ನಂತರ ಕುಟುಂಬವು ಮೈಸೂರಿಗೆ ಸ್ಥಳಾಂತರಗೊಂಡಿತು. ನಿರೂಪ್ ಮೈಸೂರಿನ ವಿದ್ಯಾ ವಿಕಾಸ್ ಇಂಜಿನಿಯರಿಂಗ್ &; ಟೆಕ್ನಾಲಜಿ ಶಿಕ್ಷಣ ಸಂಸ್ಥೆಯಿಂದ ತಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಬ್ಯಾಚುಲರ್ ಪದವಿ ಪೂರ್ಣಗೊಳಿಸಿದರು. ಅವರ ಪದವಿ ಮುಗಿದ ನಂತರ ಅವರು ಎಸ್ ಎ ಪಿ ಲ್ಯಾಬ್ಸ್ ಇಂಡಿಯಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. == ವೃತ್ತಿ == ಎಸ್ ಎ ಪಿ ನಲ್ಲಿ ಕೆಲಸ ಮಾಡುವಾಗ, ನಿರೂಪ್ ಅವರು ಹೆಸರಾಂತ ರಂಗಕರ್ಮಿ ರತನ್ ಠಾಕೋರ್ ಅವರ ಅಡಿಯಲ್ಲಿ ನಟನೆಯನ್ನು ಕಲಿಯಲು ಪ್ರಾರಂಭಿಸಿದರು. ಅವರು ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ನಾಟಕಗಳು ಮತ್ತು ಕಿರುಚಿತ್ರಗಳಲ್ಲಿ ನಟಿಸಿದರು. ಅವರು ಅನೂಪ್ ಭಂಡಾರಿಯವರ ನಿರ್ದೇಶನದ ಚೊಚ್ಚಲ ಚಿತ್ರ ರಂಗಿತರಂಗ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ಮತ್ತು ಸಾಯಿ ಕುಮಾರ್ ಕೂಡ ನಟಿಸಿದ್ದಾರೆ . 2018 ರಲ್ಲಿ, ಅವರು ಅನುಪ್ ಭಂಡಾರಿ ನಿರ್ದೇಶನದ ಅವರ ಎರಡನೇ ಚಲನಚಿತ್ರ ರಾಜರಥದಲ್ಲಿ ಕಾಣಿಸಿಕೊಂಡರು. ಪುನೀತ್ ರಾಜ್‌ಕುಮಾರ್ ಧ್ವನಿ ನೀಡಿರುವ ಈ ಚಿತ್ರವನ್ನು ಬಸ್ಸಿನ ದೃಷ್ಟಿಕೋನದಿಂದ ನಿರೂಪಿಸಲಾಗಿದೆ. 2019 ರಲ್ಲಿ,ರಾಧಿಕಾ ಪಂಡಿತ್ ಅವರೊಂದಿಗೆ ನಟಿಸಿದ ನಿರೂಪ್ ಅವರ ಮುಂದಿನ ಚಿತ್ರ ಆದಿ ಲಕ್ಷ್ಮಿ ಪುರಾಣ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರವು ಕೌಟುಂಬಿಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. 2020 ರಲ್ಲಿ, ಅವರು ಅಮೃತ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಅಭಿನಯದ ವಿಂಡೋ ಸೀಟ್ ಚಿತ್ರದಲ್ಲಿ ನಟಿಸಿದರು. ನಂತರ, ನಿರೂಪ್ ಭಂಡಾರಿ ಅವರು ದೊಡ್ಡ ಬಜೆಟ್ ಆಕ್ಷನ್ ಅಡ್ವೆಂಚರ್ ಚಲನಚಿತ್ರವಾದ ವಿಕ್ರಾಂತ್ ರೋಣದ ಭಾಗವಾದರು. ಅಲ್ಲಿ ಅವರು ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅವರೊಂದಿಗೆ ನಟಿಸಿದರು. ಈ ಬಹು ನಿರೀಕ್ಷಿತ ಚಲನಚಿತ್ರವನ್ನು ಅನುಪ್ ಭಂಡಾರಿ ನಿರ್ದೇಶಿಸಿದ್ದಾರೆ == ವೈಯಕ್ತಿಕ ಜೀವನ == ನಿರೂಪ್ ಧನ್ಯಾ ಅವರನ್ನು ಮದುವೆಯಾಗಿದ್ದಾರೆ. ನಿರೂಪ್ ಅವರ ತಂದೆ ಸುಧಾಕರ ಭಂಡಾರಿ ದೂರದರ್ಶನ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದರು. ಇವರು ಪುತ್ತೂರಿನ ಸಾಜ ಎಂಬ ಪುಟ್ಟ ಊರಿನವರು. ಅವರ ಹಿರಿಯ ಸಹೋದರ ಅನೂಪ್ ಭಂಡಾರಿ ನಿರ್ದೇಶಕ, ಗೀತರಚನೆಕಾರ ಮತ್ತು ಸಂಗೀತ ಸಂಯೋಜಕರಾಗಿದ್ದು, ನಿರೂಪ್ ಅವರ ಬಹುತೇಕ ಎಲ್ಲಾ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. == ಚಿತ್ರಗಳು == == ಉಲ್ಲೇಖಗಳು ==